ಸಾಗಲಿ ಸಾಗುತಿರಲಿ ಹೀಗೆ
ಅಲೆಯ ಮೇಲೆ ದೋಣಿಯ ಹಾಗೆ
ಬದುಕ ಬಂಡಿಯು ಸಾಗಲಿ
ಶೃತಿಗೆ ಸೇರಿ ಹಾಡುತಿರಲಿ
ನಮ್ಮ ಜೀವನ ಗಾನ
ಭಾವ - ರಾಗ - ತಾಳದೊಂದಿಗೆ
ಸಾಗುತಿರಲಿ ಪಯಣ
ಹೂವು ಹಾಸಿದ ಹಾದಿಯೇ ಇರಲಿ
ಏರು ತಗ್ಗದು ಇದ್ದರೂ ಇರಲಿ
ಏನೇ ಆಗಲಿ, ಪಯಣ ಸಾಗುತಲಿರಲಿ
ಸೋಲು ಗೆಳುವುಗಲಿದ್ದೇ ಇರಲಿ
ಇರುಳೂ ಹಗಲೂ ಬಂದೇ ಬರಲಿ
ಹಗಲು ಸೂಯ೯ನೇ ಒಡೆಯ
ಇರುಳು ಚಂದ್ರನೇ ಗೆಳೆಯ
ಬೆಳ್ಳಿ ಮೋಡವು ಚಿತ್ರ ಬರೆಯಲಿ
ತಾರೆ ತುಂಬಿ ಬಣ್ಣ ಬಳಿಯಲಿ
ಏನೇ ಆಗಲಿ, ಪಯಣ ಸಾಗುತಲಿತಲಿ